Saturday, 2 September 2017

ಚೌಚೌಪದಿ



ಕೇಳಿಸ್ತಾ
ಹೂ ಎನ್ನಲೇಬೇಕಾ..
ಕೇಳಿಸಿದ್ದು ನಿನಗೂ ಗೊತ್ತು
ನನಗೆ ಗೊತ್ತೆಂದೂ....
ಎರಡನೆಯ ಬೆಲ್...!!
ಮೊದಲ ಬೆಲ್ಲಿನಲ್ಲಿ ಹುಡುಕಿದ ಸಂಭ್ರಮ
ನೆನಪಿಲ್ಲದೇನಿಲ್ಲ..
ಕಡುಗಪ್ಪು ಹಲಗೆ..
ಎಷ್ಟು ಶಿಸ್ತಾಗಿ ಸಿದ್ಧಳಾಗಿ
ಬೇಕಾದುದೆಲ್ಲ ಜತನವಾಗಿ ಮೊದಲೇ ಜೋಡಿಸಿಟ್ಟು ಶಾರದಾ ಪೂಜೆಯನ್ನು ಸಾಂಗವಾಗಿ ಮಾಡಿಯೂ
ಬರಕತ್ತಾಗದ ಮೊದಲ ಬೆಲ್ಲು....
ಈಗ ಎರಡನೇ ಬೆಲ್ಲಿನ
ಸಮಯ.
ಮೊಳಗಿದ್ದು ಮಾರ್ದನಿಸುತ್ತಿರುವಾಗಲೇ..
ಬರೆದೂ ಬರೆದೂ ಮೋಟಾದ ಸೀಮೆಸುಣ್ಣ,
ಎರಡನೆಯ ಬೆಲ್ಲಿಗೆ ಮುನ್ನ ಯಾರೋ ಬರೆದಿಟ್ಟು ಅರೆಬರೆ ಅಳಿಸಿಟ್ಟ ಬೋರ್ಡಿನ ತುಂಬಾ ಬಿಳಿಬಿಳೀ ಬಾರು..ಬಾರು..
ಕೈಯಿಟ್ಟರೆ ಮೆತ್ತಿಕೊಳ್ಳುವ ಹಳೆಯ ಶಿಲ್ಕು...

ಕಾತರಿಸಿ ಕಾತರಿಸಿ ಕೇಳಿದ ಎರಡನೆಯ ಬೆಲ್ಲು...
ಹಳೆಯದು ಅಳಿಸಲಾಗದೆ
ಹೊಸತನ್ನು ಬರೆಯಲಾಗದೇ...


No comments:

Post a Comment